Skip to content

ಒಟ್ಟಿನಲಿ ತತ್ವವಿದು

July 8, 2011

ಒಟ್ಟಿನಲಿ ತತ್ವವಿದು, ವಿಕಟ ರಸಿಕನೋ ಧಾತ

ತೊಟ್ಟಿಲನು ತೂಗುವನು ಮಗುವ ಜಿಗುಟುವನು

ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು

ತುತ್ತು ವಿಕಟಿಗೆ ನಾವು – ಮಂಕುತಿಮ್ಮ

 

ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.

ಒಗಟೆಯೇನೀ ಸೃಷ್ಟಿ

March 6, 2011

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?

ಬಗೆದು ಬಿಡಿಸುವರಾರು ಸೂಜಿಗವನಿದನು?

ಜಗವ ನಿರವಿಸಿದ ಕೈಯೊಂದಾದೊಡೇಕಿಂತು

ಬಗೆ ಬಗೆಯ ಜೀವಗತಿ – ಮಂಕುತಿಮ್ಮ

ದೇವರೆಂಬುದೇನು

March 6, 2011

ದೇವರೆಂಬುದೇನು ಕಗ್ಗತ್ತಲೆಯ ಗವಿಯೇ

ನಾವರಿಯಲಾರದೆಲ್ಲದರೊಟ್ಟು ಹೆಸರೇ

ಕಾವನೊಬ್ಬನಿರಲ್ಕೆ ಜಗದ ಕಥೆಯೇಕಿಂತು

ಸಾವು ಹುಟ್ಟುಗಳೇನು – ಮಂಕುತಿಮ್ಮ

 

ದೇವರು ಎಂದರೆ ಏನು? ನಮಗೆ ತಿಳಿಯದ ಎಲ್ಲಕ್ಕೂ ಸೇರಿಸಿ ಕೊಟ್ಟ ಹೆಸರೇ. ಈ ಜಗತ್ತನ್ನು ಕಾಯಲು ಒಬ್ಬನಿರಲು ಜಗವು ಹೀಗೇಕೆ ಇದೆ? ಸಾವು ಹುತ್ತುಗಳು ಏತಕ್ಕಾಗಿ?

ಕೆಲೆತುಕೊಳ್ಳಲಿ ಜಗದಿ

February 26, 2011

ಕೊಳದಿ ನೀ ಮೀವಂದು ತೆರೆಯೆದ್ದು ಹರಡುತ್ತೆ

ವಲಯ ವಲಯಗಳಾಗಿ ಸಾರುವುದು ದಡಕೆ

ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು

ಕಳೆತುಕೊಳ್ಳಲಿ ಜಗದಿ – ಮಂಕುತಿಮ್ಮ

ತಾರೆ ನೂರಿದ್ದರೇನು

February 26, 2011

ಕಾರಿಳೊಳಾಗಸದಿ ತಾರೆ ನೂರಿದ್ದರೇನು?

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು

ದೂರದಾ ದೈವವಂತಿರಲಿ, ಮಾನುಷಸಖನ

ಕೋರುವುದು ಬಡಜೀವ – ಮಂಕುತಿಮ್ಮ

ಪ್ರೇಮಾತಿಶಯವಿರದ ದಾಂಪತ್ಯ

February 15, 2010

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |

ವ್ಯಾಮೋಹಕೆಡೆಗೊಟ್ಟಡದು ನಿಗಳವಹುದು ||

ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |

ಆಮಿಷದ ತಂಟೆಯಿದು ಮಂಕುತಿಮ್ಮ||

ಬಿಳಳಲ್ಲ ಬೇರಲ್ಲ

February 15, 2010

ಬಿಳಳಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ |

ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||

ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |

ತಿಳಿದವನು ನೆರವಾಗು – ಮಂಕುತಿಮ್ಮ ||

ಜಗವೆನ್ನ ಮುದ್ದಿಸದು

February 15, 2010

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |

ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ||

ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |

ರಗಳೆಗಾರಿಗೆ ಬಿಡುವೋ? – ಮಂಕುತಿಮ್ಮ ||

ಸ್ಮಿತವಿರಲಿ ವದನದಲಿ

October 19, 2009

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |

ಹಿತವಿರಲಿ ವಚನದಲಿ, ಋತವ ಬೇಡದಿರಲಿ ||

ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |

ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||

ಹಾಗೆಯೋ ಹೀಗೆಯೋ

October 19, 2009

ಹಾಗೆಯೋ ಹೀಗೆಯೋ ಹೇಗೆ ಹೇಗೆಯೋ ಜನುಮ

ಸಾಗಿ ಮುಗಿಯುವುದು; ಮುಗಿದು ಮರೆವುದದೆ ಸುಕೃತ

ಈಗಲೋ ಆಗಲೋ ಎಂದೋ ಮುಗಿವುಂಟೆಂಬ

ಭಾಗ್ಯವನು ನೆನೆದು ನಲಿ ಮಂಕುತಿಮ್ಮ

Follow

Get every new post delivered to your Inbox.