ವಿಷಯದ ವಿವರಗಳಿಗೆ ದಾಟಿರಿ

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು

ಏಪ್ರಿಲ್ 9, 2013

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ।।
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ।
ಸಾಕೆನಿಪುದೆಂದಿಗೆಲೊ ಮಂಕುತಿಮ್ಮ ।।

ಎಂದಿಗೂ ಬೇಕು ಬೇಕು ಎನ್ನುವ ಈ ಮನುಷ್ಯನ ಹುಟ್ಟಿಗೆ ಬ್ರಹ್ಮ ಏಕೆ ಕಾರಣವಾದನೋ  ಗೊತ್ತಿಲ್ಲ. ಅದು ಬೇಕು ಇದು ಬೇಕು ಎಂದು ಕೇಳುತ್ತಲೇ ಇರತ್ತಾನೆ ಮಾನವ. ಇವನಿಗೆ ಸಾಕು ಎನುವುದು ಎಂದು ಬರುವುದೋ ತಿಳಿಯುವುದಿಲ್ಲ. ಎಷ್ಟು ಬಂದರು ಇನ್ನಷ್ಟು ಬೇಕೆನ್ನುವ ಆಸೆ ಇವನ ಬೆಂಬಿಡದೆ ಕಾಡುತ್ತಿರುತ್ತದೆ. ಕೊನೆ ತಿಳಿದಿದ್ದರೂ ಪ್ರತಿ ದಿನ ಮಗುದೊಂದು ಬೇಕಿಗೆ ಓಡುತ್ತಲೇ ಇರುತ್ತದೆ ಜೀವನ.

Advertisements

ಒಟ್ಟಿನಲಿ ತತ್ವವಿದು

ಜುಲೈ 8, 2011

ಒಟ್ಟಿನಲಿ ತತ್ವವಿದು, ವಿಕಟ ರಸಿಕನೋ ಧಾತ

ತೊಟ್ಟಿಲನು ತೂಗುವನು ಮಗುವ ಜಿಗುಟುವನು

ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು

ತುತ್ತು ವಿಕಟಿಗೆ ನಾವು – ಮಂಕುತಿಮ್ಮ

 

ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.

ಒಗಟೆಯೇನೀ ಸೃಷ್ಟಿ

ಮಾರ್ಚ್ 6, 2011

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?

ಬಗೆದು ಬಿಡಿಸುವರಾರು ಸೂಜಿಗವನಿದನು?

ಜಗವ ನಿರವಿಸಿದ ಕೈಯೊಂದಾದೊಡೇಕಿಂತು

ಬಗೆ ಬಗೆಯ ಜೀವಗತಿ – ಮಂಕುತಿಮ್ಮ

ದೇವರೆಂಬುದೇನು

ಮಾರ್ಚ್ 6, 2011

ದೇವರೆಂಬುದೇನು ಕಗ್ಗತ್ತಲೆಯ ಗವಿಯೇ

ನಾವರಿಯಲಾರದೆಲ್ಲದರೊಟ್ಟು ಹೆಸರೇ

ಕಾವನೊಬ್ಬನಿರಲ್ಕೆ ಜಗದ ಕಥೆಯೇಕಿಂತು

ಸಾವು ಹುಟ್ಟುಗಳೇನು – ಮಂಕುತಿಮ್ಮ

 

ದೇವರು ಎಂದರೆ ಏನು? ನಮಗೆ ತಿಳಿಯದ ಎಲ್ಲಕ್ಕೂ ಸೇರಿಸಿ ಕೊಟ್ಟ ಹೆಸರೇ. ಈ ಜಗತ್ತನ್ನು ಕಾಯಲು ಒಬ್ಬನಿರಲು ಜಗವು ಹೀಗೇಕೆ ಇದೆ? ಸಾವು ಹುತ್ತುಗಳು ಏತಕ್ಕಾಗಿ?

ಕಳೆತುಕೊಳ್ಳಲಿ ಜಗದಿ

ಫೆಬ್ರವರಿ 26, 2011

ಕೊಳದಿ ನೀ ಮೀವಂದು ತೆರೆಯೆದ್ದು ಹರಡುತ್ತೆ

ವಲಯ ವಲಯಗಳಾಗಿ ಸಾರುವುದು ದಡಕೆ

ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು

ಕಳೆತುಕೊಳ್ಳಲಿ ಜಗದಿ – ಮಂಕುತಿಮ್ಮ

ತಾರೆ ನೂರಿದ್ದರೇನು

ಫೆಬ್ರವರಿ 26, 2011

ಕಾರಿಳೊಳಾಗಸದಿ ತಾರೆ ನೂರಿದ್ದರೇನು?

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು

ದೂರದಾ ದೈವವಂತಿರಲಿ, ಮಾನುಷಸಖನ

ಕೋರುವುದು ಬಡಜೀವ – ಮಂಕುತಿಮ್ಮ

ಪ್ರೇಮಾತಿಶಯವಿರದ ದಾಂಪತ್ಯ

ಫೆಬ್ರವರಿ 15, 2010

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |

ವ್ಯಾಮೋಹಕೆಡೆಗೊಟ್ಟಡದು ನಿಗಳವಹುದು ||

ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |

ಆಮಿಷದ ತಂಟೆಯಿದು ಮಂಕುತಿಮ್ಮ||